Monday, November 5, 2007

ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)

ಒಂದು ದಿನ ಸುಮ್ಮನೆ ನಾ ನೋಡಿದೆ ನಿನ್ನನೇ
ನೀ ನಕ್ಕು ಸೇರಿದೆ ಎದೆಗೂಡನೆ ನಿನ್ನ ನಗುವಿಗೆ
ನನ್ನ ಮನಸು,ಹೃದಯ ಕೊಟ್ಟೆ
ನಿನ್ನ ಕನಸಲ್ಲಿ ನಾ ಮಲಗಿಬಿಟ್ಟೆ ಊಟ ಬಿಟ್ಟೆ
ಕೆಲಸ ಬಿಟ್ಟೆ ಆಟ ಬಿಟ್ಟೆ ಅಪ್ಪ ಅಮ್ಮನ ಬಿಟ್ಟೆ
ನಿನ್ನ ಪ್ರೀತಿ ಹೊಳೆಯಲ್ಲಿ ಜಾರಿ ಬಿಟ್ಟೆ
ನೆನಪುಗಳಲ್ಲಿ ನಲಿದು ಬಿಟ್ಟೆ ಕನವರಿಕೆಯಲ್ಲಿ ಕುಣಿದು ಬಿಟ್ಟೆ
ನನ್ನ ತನ ಮರೆತು ಬಿಟ್ಟೆ ನಿನ್ನ ದಾಸನಾಗಿಬಿಟ್ಟೆ
ನೀ ಈಗ ಅದೇ ನಗುವಿಂದ ಬಳಿಬಂದು ಬಿಟ್ಟೆ
ನಿನ್ನ ಪ್ರಿಯತಮನ ತಂದು ನನ್ನ ಕೈ ಕುಲುಕಿಸಿ ಬಿಟ್ಟೆ
ಇವರು ನನ್ನ ಬಾವಿ ಪತಿಎಂದು ಬಿಟ್ಟೆ
ವಿರಹ ಸಾಗರದಿ ನನ್ನ ನೂಕಿ ಬಿಟ್ಟೆ ಬಾವಿ ಪತಿಯೊಂದಿಗೆ ಗಾಡಿ ಹತ್ತಿ ಬಿಟ್ಟೆ
ನೀ ಎಲ್ಲವ ಮರೆತು ಬಿಟ್ಟೆ ನೋವು,ನೆನಪು,ಕಹಿ,ನನಗೆ ಬಿಟ್ಟೆ
ನನಗೆ ಟಾಟಾ ಎಂದು ಬಿಟ್ಟೆ ನನ್ನ ಪಾಲಿಗೆ ಬಣ್ಣದ ಚಿಟ್ಟೆ
ನೀನಾಗಿ ಬಿಟ್ಟೆ ನಿನ್ನಿಂದ ನಾ ವಿರಹಿ ಯಾಗಿಬಿಟ್ಟೆ

-ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

No comments: