Monday, November 5, 2007

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡುಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ಪಲ್ಲವಿ
ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ಮನಸನ್ನು ಕಲಕಿದವಳೆ ನೀನಾರೆನನಚಲುವೆಎದೆಯ ಕದವನ್ನು ತೆಗೆದವಳೆ ನೀನಾರೆ "ಮಾ"
ಅಂದಾನೆ ನಾನೆಂದು ಚಂದಾನೆ ತಾನೆಂದು ಬಿಂಕದಲಿ ನಿಂತವಳು ನೀನ್ಯಾರೆನನಚಲುವೆಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ"ಮಾ"
ಮಂದಹಾಸ ಬೀರುತ್ತಾ ತುಂಬುನಗೆ ಚಲ್ಲುವ ಚಂದಿರನ ಮೊಗದವಳೆ ನೀನ್ಯಾರೆನನ ಚಲುವೆಮನ ಮಂದಿರದಿ ಬೆಳಕ ತಂದವಳೆ ನೀನ್ಯಾರೆ "ಮಾ"
ಇಳಿಬಿದ್ದ ಜಡೆಯವಳೆ ಗುಳಿಬಿದ್ದ ಕೆನ್ನೆಯವಳೆ ಸುಳಿದು ಸುಳಿದೆನ್ನ ಕಾಡೋಳೆನನ ಚಲುವೆಸುಮದಂತೆ ಪರಿಮಳ ತಂದವಳೆ ನೀನ್ಯಾರೆ"ಮಾ"
ನವಿಲಂತೆ ಕುಣಿಯೋಳೆ ಮಿಚಂತೆ ಹೊಳೆಯೊಳೆನಾಟ್ಯದ ರಾಣಿ ನೀನ್ಯಾರೆನನ ಚಲುವೆ ಎದೆಯಾಗ ತಾಳ ತುಂಬಿದವಳೆ ನೀನ್ಯಾರೆ "ಮಾ"
ಮನವೆಲ್ಲ ಹಸಿರಾಗಿ ಜೀವಕ್ಕೆ ಉಸಿರಾದ ಕನಸಿನ ಕಣ್ಮ್ಣಣಿ ನೀನ್ಯಾರೆನನ ಚಲುವೆ ಇರುಳಿಗೆ ಜೊತೆಯಾಗಿ ಬಂದವಳೆ ನೀನ್ಯಾರೆ"ಮಾ"
ಮನಸಿನ ಚಿತ್ತಾರ ಪಡೆದು ನೀ ಆಕಾರನನಗಾಗಿ ಎಂದು ನೀ ಬರುವೆನನ ಚಲುವೆ ಕಾಯಲಾರೆ ನಾ ಬಳಿ ಬಾರೆನನಗಾಗಿ ಇಂದು ನೀ ಬಾರೆ "ಮಾ"

ಕೃಷ್ಣಮೊರ್ತಿ ಅಜ್ಜಹಳ್ಳಿ

No comments: