Monday, November 5, 2007

ಹೆಣ್ಣಿನ ಜನುಮ ದೊಡ್ಡದು

ಹೆಣ್ಣಿನ ಜನುಮ ದೊಡ್ಡದುಯಾರು ಅದ
ಸಣ್ಣದೆಂದೆನ ಬೇಡಿಅಣ್ಣ ತಮ್ಮ ಬಂಧು ಬಳಗ
ಹೆಣ್ಣಿನ ಜನುಮ ದೊಡ್ಡದು ಬಲುದೊಡ್ಡದು "ಪಲ್ಲವಿ"
ಹುಟ್ಟಿದ ಮನೆ,ಮಂದಿ ಬಿಟ್ಟುಕಾಲಿಟ್ಟ ಮನೆ,ಮನ ಬೆಳಗಿ

ಮೊಜಗಕ್ಕೆ ಮಾದರಿಯಾಗಿ ಬಾಳುವ"ಹೆಣ್ಣಿನ"
ತಾಯಾಗಿ,ತಂಗಿಯಾಗಿ,ಮಗಳಾಗಿ,ಮದದಿಯು ತಾನಾಗಿ

ಪ್ರೀತಿ,ವಾತ್ಸಲ್ಯ,ಅನುರಾಗಕ್ಕೆ ಬೆಸುಗೆಯಾಗಿ
ಪ್ರತಿನಿತ್ಯ ಪರಪಂಚದೊಳಗೆ(ಬಳಲುವ)ಬಾಳುವ "ಹೆಣ್ಣಿನ"
ಕಾರ್ಯೇಷುದಾಸಿ,ಕರಣೇಶು ಮಂತ್ರಿರೂಪೇಚ ಲಕ್ಷ್ಮಿ,ಶಯನೇಶು ರಂಬ

ಕ್ಷಮಯಾದರಿತ್ರಿ,ಭೋಜ್ಯೇಶು ಮಾತೆಯಾಗಿ ಬಾಳುವ"ಹೆಣ್ಣಿನ"
ಸತ್ಯಕ್ಕೆ ಸಾವಿತ್ರಿ,ಸೀತೆ,ಅಹಲ್ಯೆಯಾಗಿಧರ್ಮಕ್ಕೆ

ಚಂದ್ರಮತಿ,ಚಂದ್ರಹಾಸೆಯಾಗಿತ್ಯಾಗಕ್ಕೆ
ಶಾಂತಲೆ,ಶಕುಂತಲೆಯಾಗಿ ಬಾಳುವ"ಹೆಣ್ಣಿನ"
ಕೀರ್ತಿಯಲಿ ಚನ್ನಮ್ಮ ಸ್ಪೂರ್ತಿಗೆ ಸಂಚಿ ಹೊನ್ನಮ್ಮಧೀರತ್ವಕ್ಕೆ

ವನಕೆ ಓಬವ್ವ,ಅಕ್ಕಯ್ಯ(ಅಕ್ಕಮಹಾದೇವಿ)ಕನ್ನಡ ನಾಡಿಗೆ ಹೆಸರಾಗಿ ಬಾಳಿದ "ಹೆಣ್ಣಿನ"

-ಕೃಷ್ಣಮೊರ್ತಿ ಐ ಇ ಎಂ ಬಿ ಎಂ ಎಸ್ ಸಿ ಇ

ವಿರಹದಲಿಮನ

ನೀನಿಲ್ಲದೆ ಅನುದಿನ ವಿರಹ ಎನ್ನತುಂಬ
ನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬ
ಪ್ರತಿ ಇರುಳು ಕಾಡುತಿಹುದು ಮೌನ
ಮನಮಾಡುತಿಹುದು ನಿನ್ನ ಹೆಸರದ್ಯಾನ

ಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿ
ನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆ
ತಾರೆಗಳು ನಗುತಿವೆ ಶಶಿಯಕಂಡು
ಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತ
ಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರ
ನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರ
ನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನು
ಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನು
ಸಂಜೆ ಕೆಂಪು ಪ್ರೀತಿಗೆ ದ್ಯೋತಕ ವಾಗಿದೆ ಹರಿವ

ನೀರು ಶೃಂಗಾರಕ್ಕೆ ದ್ಯೋತಕ ವಾಗಿದೆ
ಕವನ ಕನಸಿನಾಚೆಗೂ ನಿನ್ನ ಪ್ರೀತಿ


ಅಚ್ಚಳಿಯದೆ ಉಳಿವುದು ಓಲವರೀತಿ
ನೋವನುಂಗಿ ಬದುಕೆ ಬಾಳೆ ಹೂವಮಲ್ಲಿಗೆ

ಕಾಡದಿರು ಇನ್ನ ಮುಂದಾದರೂ ನೀ ಬಾಮೆಲ್ಲಗೆ
ಅರಳಿ ಕಂಪಸೂಸೋ ಸಂಜೆ ಮಲ್ಲಿಗೆ

-ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡುಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ಪಲ್ಲವಿ
ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ಮನಸನ್ನು ಕಲಕಿದವಳೆ ನೀನಾರೆನನಚಲುವೆಎದೆಯ ಕದವನ್ನು ತೆಗೆದವಳೆ ನೀನಾರೆ "ಮಾ"
ಅಂದಾನೆ ನಾನೆಂದು ಚಂದಾನೆ ತಾನೆಂದು ಬಿಂಕದಲಿ ನಿಂತವಳು ನೀನ್ಯಾರೆನನಚಲುವೆಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ"ಮಾ"
ಮಂದಹಾಸ ಬೀರುತ್ತಾ ತುಂಬುನಗೆ ಚಲ್ಲುವ ಚಂದಿರನ ಮೊಗದವಳೆ ನೀನ್ಯಾರೆನನ ಚಲುವೆಮನ ಮಂದಿರದಿ ಬೆಳಕ ತಂದವಳೆ ನೀನ್ಯಾರೆ "ಮಾ"
ಇಳಿಬಿದ್ದ ಜಡೆಯವಳೆ ಗುಳಿಬಿದ್ದ ಕೆನ್ನೆಯವಳೆ ಸುಳಿದು ಸುಳಿದೆನ್ನ ಕಾಡೋಳೆನನ ಚಲುವೆಸುಮದಂತೆ ಪರಿಮಳ ತಂದವಳೆ ನೀನ್ಯಾರೆ"ಮಾ"
ನವಿಲಂತೆ ಕುಣಿಯೋಳೆ ಮಿಚಂತೆ ಹೊಳೆಯೊಳೆನಾಟ್ಯದ ರಾಣಿ ನೀನ್ಯಾರೆನನ ಚಲುವೆ ಎದೆಯಾಗ ತಾಳ ತುಂಬಿದವಳೆ ನೀನ್ಯಾರೆ "ಮಾ"
ಮನವೆಲ್ಲ ಹಸಿರಾಗಿ ಜೀವಕ್ಕೆ ಉಸಿರಾದ ಕನಸಿನ ಕಣ್ಮ್ಣಣಿ ನೀನ್ಯಾರೆನನ ಚಲುವೆ ಇರುಳಿಗೆ ಜೊತೆಯಾಗಿ ಬಂದವಳೆ ನೀನ್ಯಾರೆ"ಮಾ"
ಮನಸಿನ ಚಿತ್ತಾರ ಪಡೆದು ನೀ ಆಕಾರನನಗಾಗಿ ಎಂದು ನೀ ಬರುವೆನನ ಚಲುವೆ ಕಾಯಲಾರೆ ನಾ ಬಳಿ ಬಾರೆನನಗಾಗಿ ಇಂದು ನೀ ಬಾರೆ "ಮಾ"

ಕೃಷ್ಣಮೊರ್ತಿ ಅಜ್ಜಹಳ್ಳಿ

ಜಾನಪದಶೈಲಿಯ ಗೀತೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ
ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ
ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ
ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ"
ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ
ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ
ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ"
ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ
ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ
ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ"
ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ
ಬಯದಲಿ ಹುಡುಗನ ಕೈಕಾಲು ನಡುಗಿತ್ತ
ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ
ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ"
ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ
ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ
ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

ಮನದ ಮೃದಂಗ ಮೀಟಿ
ಎದೆಯಲ್ಲಿ ಪ್ರೇಮರಾಗ ಮಿಡಿವಂತೆ
ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು
ಅಂದಕಾರದ ಬದುಕಿಗೆ ಬೆಳಕಾಗಬಲ್ಲ
ಅರಿವಿನ ಅ(ಹ)ರಿಣಿ ಅವಳಾಗಬೇಕು
ಜೀವಕ್ಕೆ ಉಸಿರು-ಹಸಿರಾಗ ಬಯಸುವ
ಚೈತ್ರ ಚಲುವ ಹೆಣ್ಣಾಗಿರಬೇಕು
ಬರಡಾದ ಬದುಕಿಗೆ ಜೀವಕಳೆಯ
ತುಂಬಬಲ್ಲ ಹೆಣ್ಣು ಅವಳಾಗಬೇಕು
ಬತ್ತಿದೆದೆಯಲ್ಲಿ ಬರವಸೆಯ ಜಲವ
ತುಂಬುವಂತಹ ತರುಣಿ ಅವಳಾಗಬೇಕು
ಮನದ ಮೌನ ಮುರಿದು ಜೀವದಲಿ
ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು
ಮನದ ಬಾವ ಅರಿತು ನಡೆವ ನುಡಿವ
ನವ ತರುಣಿಮಣಿ ಅವಳಾಗಬೇಕು
ಮನದ ಹಸಿವು-ದಾಹಗಳ ಅರಿತು
ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು
ವನಪು ವಯ್ಯಾರ ಮರೆತಿರಬೇಕು
ಒಲವು-ಛಲವು ಜೊತೆಗಿದ್ದರೆ ಸಾಕು
ಬೆಳ್ಳಿಗೆಜ್ಜೆ ಯಾರಿಗೆ ಬೇಕು
ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು
ಮುತ್ತು ರತ್ನ ಯಾರಿಗೆ ಬೇಕು
ಮುಗುಳ್ನಗೆ ಸದಾಇರಲಿ ಸಾಕು
ಸಿರಿ ಸಂಪತ್ತು ಯಾಕೆ ಬೇಕು
ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

“ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು”

ಹಲೋ ಪೂರ್ಣಿಮಾ.........
ಹೇಗಿದೆ ನಮ್ಮೂರು ಹೇಗಿದ್ದಾರೆ ನಮ್ಮೂರೊರು
ಈಗ ಏಗಿದ್ದಾರೆ ನಮ್ಮೂರ ಜನ ಕುದೂರ ಜನ "ಪ"
ಊರಿನುದ್ದಾರಕ್ಕಾಗಿ ಶ್ರಮ ಪಡೊರಿದ್ದಾರಾ !
ಶಾಲೆ,ಕಾಲೇಜು,ಆಸ್ಪತ್ರೆ,ಬ್ಯಾಂಕು ಹೈಟೆಕ್ ಮಾಡವರ "ಹೇಗಿದೆ"
ತುಮಕೂರ್ ರಸ್ತೆ,ಶಿವಗಂಗೆ ರಸ್ತೆ.ಮರೂರ್ ರಸ್ತೆ
ಬಿಸ್ಕೂರ್ ರಸ್ತೆ,ಸೋಲೂರ್ ರಸ್ತೆ ಸರಿಯಾಗಿ ಮಾಡವರ "ಹೇಗಿದೆ"
ಲಕ್ಷ್ಮಮ್ಮ,ಕನ್ನಿಕಾ ಪರಮೇಶ್ವರಿ,ಆಂಜನೇಯ,ಲಕ್ಷ್ಮಿನರಸಿಂಹ ಸ್ವಾಮಿ
ಜಾತ್ರೆ ವೈಬವ ದಿಂದ ಮಾಡ್ತಾರ ಶ್ರೀರಕ್ಷೆ ಬಿಡದೆ ಪಡೆದವರ "ಹೇಗಿದೆ"
ರಾಜ್ಯೋತ್ಸವ,ಸ್ವಾತಂತ್ರ ನಾಡಹಬ್ಬ ಮಾಡ್ತಾರ
ಆ ಪಕ್ಷ ಈ ಪಕ್ಷ ಅನ್ಕೋಂಡು ಕಿತ್ತಾಡೊದ ಮರೆತವರ "ಹೇಗಿದೆ"
ಈ ಮೇಲು ಇಂಟರ್ ನೆಟ್ಟು ಬ್ರಾಡ್ ಬ್ಯಾಂಡು ಕಂಪ್ಯೂಟರು
ತಾಂತ್ರಿಕ ಶಿಕ್ಷಣದ ಅನುಕೂಲ ಮಾಡವರ ಓದುವಂತ
ಹುಡುಗರಿಗೆ ಅವಕಾಶ ಕೊಟ್ಟವರ "ಹೇಗಿದೆ"
ದಾಕ್ಷಾಯಣಮ್ಮ ಯತಿರಾಜು ಬಾಲರಾಜು ಹನುಮಂತಪ್ಪ
ನಂತವರು ಒಟ್ಟಾಗಿ ಕುದೂರಿನೇಳ್ಗೆಗಾಗಿ ದುಡಿತಾವರ "ಹೇಗಿದೆ"
ಸರ್ಕಾರಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ
ಖಾಸಗಿ ಶಾಲಾ ಕಾಲೇಜಿನ ಫಲಿತಾಂಶ ಹೇಗಿದೆ "ಹೇಗಿದೆ"
ಚಿತ್ರ ಮಂದಿರಗಳ ಹೈಟೆಕ್ ಮಾಡವರ ಹೊಟೆಲ್ ಗಳ ಶುಚಿಯಾಗಿ ಇಟ್ತವರ
ಆರೋಗ್ಯ ಕೇಂದ್ರ ಹೇಗಿದೆ ಖಾಸಗಿ ಕ್ಲಿನಿಕ್ ನಲ್ಲಿ ಟ್ರೀಟ್ ಮೆಂಟು ಎಲ್ಲಿ ಸುಲಬದಲ್ಲಿ ಸಿಗ್ತದೆ "ಹೇಗಿದೆ"
ವಿವೇಕಾನಂದ ಸಂಘದವರು ಸಾಂಸ್ಕೃತಿಕ,ಸಾಮಾಜಿಕ ಕಾರ್ಯಕ್ರಮ ಬಿಡದಂತೆ ಮಾಡ್ತಾರ
ಶಾರದಾ ಮಹಿಳಾ ಸಮಾಜದವರು ತರಬೇತಿ ನಿಲ್ಲಿಸ್ ದೇ ಮಾಡ್ತಾರ
ಬ್ರಂಹ ಕುಮಾರೀಸ್ ಕಾರ್ಯ ವೈಖರಿ ಹ್ಯಾಗಿದೆ "ಹೇಗಿದೆ"
ಕೊನೆದಾಗಿ ನನದೊಂದು ರಿಕ್ವೆಸ್ಟು ತಗೊಳಿ
ವೈ ಎನ್ ವಿ ಸಿಕ್ಕಿದ್ರೆ ನನ್ನ ವಂದನೆ ಹೇಳ್ಬಿಡಿ
ರಘು ಡಾಕ್ಟರ್ ಸಿಕ್ಕಿದ್ರೆ ನಿಮ್ಮ ಶಿಷ್ಯ ನಿಮ್ಮ ಕೇಳಿದ ಅಂದ್ ಬಿಡಿ
ನಮ್ಮೂರ ದೇವಾನು ದೇವತೆಗಳಿಗೆಲ್ಲ ನೀವು ಅಲ್ಲಿಗೋದಾಗ
ನನ್ನ ಭಕ್ತಿಪೂರ್ವಕ ನಮನಗಳ ಹೇಳ್ಬಿಡಿ ನಿಮ್ಮ ಅನಿಸಿಕೆ
ಮರೀದೆ ಬರೆದ್ ಬಿಡಿ
-ವೆಂ ಕೃ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ ಬೆಂಗಳೂರು

ಇಳೆಗಿಳಿದ ಮುಂಗಾರಿನ ಮೊದಲ ಮಳೆ

ಮಳೆ ಬಂತು ಮುಂಗಾರು ಮಳೆ ಬಂತು
ಇಳೆ ನೆನೆದು ಚೈತ್ರ ನಲಿಯಿತು
ಬಾನಿಂದ ಮಳೆ ಬಂತು ಭರಣಿ ಮಳೆ ಬಂತು
ಧರಣಿಯೊಡಲು ತಣಿಯಿತು "ಪ"
ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ
ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗುಂಡು
ಮಿಂಚಿನ ಮತಾಪು ಕಡ್ಡಿಯ ಸುಸ್ವಾಗತ ಮಳೆಗೆ "ಮಳೆ"
ವರ್ಷದಾದಿಯ ಮೊದಲ ದೀಪಾವಳಿಯಾಯ್ತು
ಭರಣಿಯು ಧರಣಿಯ ತಣಿಸಿದಂದು
ಸರ್ವಜಿತುವಿನ ಮುಂಗಾರಿನ ಮಳೆಯಾಯ್ತು "ಮಳೆ"
ಧರೆಯ ಮರಗಿಡ ಹಸಿರಿನಿಂದ ನಳ ನಳಿಸುತ್ತಿದೆ
ಮಾಮರದಿ ಕೋಗಿಲೆ ಇಂಚರದಿ ಕೂಗಿದೆ
ಹೊ(ಓ)ಣಗಿದ್ದ ಬಯಲಲ್ಲಿ ಹಸಿರ ಚಿಗುರು ಕಾಣುತಿದೆ "ಮಳೆ"
ನೊಂದ ರೈತ ಮನಕೆ ಸಣ್ಣ ಬರವಸೆ ಮೂಡಿದೆ
"ಧರಣಿಗೆ ಭರಣಿಯು ಬಿದ್ದರೆ ಸಂಮೃದ್ದಿ" ಎಂಬ
ನಾಣ್ನುಡಿಯ ಬರವಸೆಯಲಿ ಮನ ನಂಬಿದೆ "ಮಳೆ"
ಮುಂಗಾರಿನ ಮಳೆ ಇಳೆಗಾಗಿದೆ ಎಲ್ಲ ಮನಕೆ
ಬರವಸೆಯ ಮೇಣದ ಬತ್ತಿ ಹತ್ತಿಸಿದೆ

-ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ